ಶ್ರೀ ಶಿವಚಿದಂಬರೇಶ್ವರ ಮೂಲ ಪೀಠ, ಮೂಲ ಮಹಾಕ್ಷೇತ್ರ ಸಂಸ್ಥಾನದ ನೀತಿ ಸಂಹಿತೆಗಳು

ಭಾಗ – 1

  1. I) ಶ್ರೀ ಚಿದಂಬರ ವಂಶ ಪರಂಪರೆ ಪೀಠಾಧಿಕಾರಿಗಳು, ಶ್ರೀ ಶಿವಚಿದಂಬರೇಶ್ವರ ಮೂಲಪೀಠ ಮೂಲಮಹಾಕ್ಷೇತ್ರ ಸಂಸ್ಥಾನದ ಆಡಳಿತ ಸೂತ್ರ ಹಿಡಿದು ಅಧಿಪತಿಯಾಗಿ ಪರಂಪರೆ ಮುನ್ನಢೆಸಿಕೊಂಡು ಹೋಗಬೇಕು.

  2. II) ಪೀಠಾಧಿಕಾರಿಗಳು ತ್ರಿಕಾಲ ಸ್ನಾನ, ಸಂಧ್ಯಾ, ಪೂಜೆ, ಜಪ, ತಪ, ಅನುಷ್ಠಾನ, ಪಾತೇಶ್ವರ ಪೂಜೆ ಹಾಗೂ ಹಿಂದು ವೈದಿಕ ಸಂಸ್ಕಾರ ಧರ್ಮ ಪರಿಪಾಲನೆ ಮಾಡಬೇಕು ಹಾಗು ಆಚರಣೆಯನ್ನು ಮಾಡಬೇಕು.

  3. III) ಪೀಠಾಧಿಕಾರಿಗಳು ತಮ್ಮ ವೈಯಕ್ತಿಕ ಹಾಗು ಸಾಂಸಾರಿಕ ಹಿತವನ್ನು ಬಯಸುವುದರ ಜೊತೆಗೆ ಶ್ರೀ ಚಿದಂಬರ ಭಕ್ತರ ಹಿತವನ್ನು ಗಮನಿಸಬೇಕು. ಭಕ್ತರಿಗೆ ಅಖಂಡ ಕಲ್ಯಾಣವನ್ನು ಬಯಸುತ್ತಿರಬೇಕು.

  4. IV) ಪೀಠಾಧಿಕಾರಿಗಳು ತಮ್ಮ ಕುಟುಂಬ ವ್ಯವಸ್ಥೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕು. ಪೀಠಾಧಿಕಾರಿಗಳು ಕುಟುಂಬದ ಎಲ್ಲ ಸದಸ್ಯರೊಂದಿಗೆ ಅನ್ಯೋನ್ಯವಾಗಿರಬೇಕು.

  5. V) ಶ್ರೀ ಶಿವಚಿದಂಬರೇಶ್ವರ ಮೂಲಪೀಠ, ಮೂಲಮಹಾಕ್ಷೇತ್ರದ ಆರಾಧ್ಯ ಉಪಾಸನಾ ದೇವತೆಗಳಾದ ಶ್ರೀ ಸರಸ್ವತೀ, ಸಾವಿತ್ರೀ ಸಮೇತ ಶ್ರೀ ಚಿದಂಬರೇಶ್ವರ ಆರಾಧಿಸುವದಕ್ಕೆ ಭಕ್ತರಿಗೆ ಪ್ರತಿಮೆಗಳನ್ನಾಗಲೀ ಅಥವಾ ಭಾವಚಿತ್ರಗಳನ್ನಾಗಲೀ ತಯಾರಿಸಿ ವಿತರಿಸುವುದು.

  6. VI) ಪೀಠಾಧಿಕಾರಿಗಳಿಗೆ ನೈಸರ್ಗಿಕ ಆರೋಗ್ಯ ತೊಂದರೆ, ಆಕಸ್ಮಿಕ ನಿಧನ ಅಥವಾ ಬುಧಿ ಭ್ರಮೆಯಾದಲ್ಲಿ, ಪೀಠಾಧಿಕಾರಿಗಳ ಸಂತಾನದಲ್ಲಿ ಹಿರಿಯ ಸುಪುತ್ರ ಮುಂದಿನ ಉತ್ತರಾಧಿಕಾರಿಯಾಗಬೇಕು. ಒಂದು ವೇಳೆ ಗಂಡು ಸಂತಾನ ಪ್ರಾಪ್ತಿ ಇಲ್ಲದಲ್ಲಿ ನಮ್ಮ ವಂಶದಲ್ಲಿ ಧರ್ಮಸಿಂದು ನಿಯಮದ ಪ್ರಕಾರ ತೆಗೆದುಕೊಂಡ ದತ್ತು ಪುತ್ರನೇ ಉತ್ತರಾಧಿಕಾರಿಯಾಗತಕ್ಕದ್ದು.

  7. VII) ಶ್ರೀ ಶಿವಚಿಂಬರೇಶ್ವರ ಮೂಲಪೀಠ, ಮೂಲ ಮಹಾಕ್ಷೇತ್ರ ಸಂಸ್ಥಾನದ ನಿತ್ಯ, ವಾರ, ಮಾಸಿಕ, ಧಾರ್ಮಿಕ ಕಾರ್ಯಕ್ರಮಗಳು ವಾರ್ಷಿಕ ಉತ್ಸವ, ಮಹೋತ್ಸವಗಳನ್ನು ನಡೆಸಿಕೊಂಡು ಹೋಗಬೇಕು. ಅವುಗಳು ಈ ರೀತಿ ಕೆಳಕಂಡಂತೆ ಇರುತ್ತವೆ.


  8. ಶ್ರೀ ಚಿದಂಬರೇಶ್ವರ ಮೂಲಪೀಠ, ಮೂಲಮಹಾಕ್ಷೇತ್ರ ಸಂಸ್ಥಾನದಲ್ಲಿ ನಿತ್ಯ, ವಾರ, ಮಾಸಗಳಲ್ಲಿ, ವಾರ್ಷಿಕ ಜರುಗುವ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಉತ್ಸವ ಆಚರಣೆ ಹಾಗೂ ವಿವರಣೆ:

    1) ಪ್ರತಿ ದಿನ :
    i) ಬೆಳಿಗ್ಗೆ : 4-30 ರಿಂದ 6 ರ ವರೆಗೆ ಭೂಪಾಳಿ, ಕಾಕಡಾರತಿ, ಪ್ರಾಥಃಕಾಲ ಪೂಜೆ, ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ.
    ii) ಮಧ್ಯಾಹ್ನ : 11 ರಿಂದ 1 ರವರೆಗೆ ಪೂಜೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಧೂಪ-ದೀಪ, ಮಹಾನೈವೇದ್ಯ (ಪೀಠಾಧಿಕಾರಿಗಳ ಕುಟುಂಬ ನಿವಾಸ ವಿಭಾಗದಲ್ಲಿ ಮಡಿಯಿಂದ ತಯಾರಿಸಿದ ಅಡಿಗೆ) ಬಿಲ್ವಾರ್ಚನೆ, ಆರತಿ ಮಹಾಮಂಗಳಾರತಿ, ಮಂತ್ರಪುಷ್ಪ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ, 1 ರಿಂದ 2 ಮಹಾಪ್ರಸಾದ ವಿತರಣೆ.
    3) ಸಾಯಂಕಾಲ : 6 ರಿಂದ 8 ರವರೆಗೆ ಸಾಯಂಕಾಲ ಪೂಜೆ, ಧೂಪ, ದೀಪ, ನೈವೇದ್ಯ, ಶೇಜಾರತಿ, ತೀರ್ಥ ಪ್ರಸಾದ ವಿತರಣೆ, ದಿಂಡಿ ವಿಭಾಗದಿಂದ ಅಭಂಗ ಪಠಣ, ಸಾಂಪ್ರದಾಯಕ ಭಜನಾ ವಿಭಾಗದಿಂದ ಸಂಗೀತ ಸೇವೆ ಹಾಗೂ ಸಾಂಪ್ರದಾಯಕ ಭಜನೆ.

    2) ಪ್ರತಿ ವಾರ :
    1. ಪ್ರತಿ ಸೋಮವಾರ ಪಾಲಕೀ ಸೇವೆ 6 ರಿಂದ 7, ತಾಳ ವೀಣಾ ಮೃದಂಗ ವೇದ ಘೋಷದೊಂದಿಗೆ ಪಾಲಕೀ ಉತ್ಸವ ನಡೆಯುತ್ತದೆ.

    3) ಪ್ರತಿ ಮಾಸ :

    i) ಚೈತ್ರ ಮಾಸ :
    1) ನವಮಿ : ರಾಮನವಮಿ ನಿಮಿತ್ಯ ರಾಮದೇವರಿಗೆ ಅಭ್ಯಂಗ ಅಭಿಷೇಕ, ಅಲಂಕಾರ ಪೂಜೆ, ಧೂಪ-ದೀಪ, ನೈವೇದ್ಯ, ಆರತಿ, ಮಂತ್ರಪುಷ್ಪ, ಪ್ರಾರ್ಥನೆ ಹಾಗೂ ತೀರ್ಥ ಪ್ರಸಾದ ವಿತರಣೆ.
    2) ವಸಂತ ಪೂಜೆ : ವೈದಿಕ ಬ್ರಾಹ್ಮಣ ಪಾದ ಪೂಜೆ, ಕೊಸಂಬರಿ ಪಾನಕ ವಿತರಣೆ

ii) ವೈಶಾಖ ಮಾಸ :
ವೈಶಾಖ ಶುದ್ಧ ಷಷ್ಠಿ ಶ್ರೀ ಚಿದಂಬರೇಶ್ವರ ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ಜರಗುವ ಕಾರ್ಯಕ್ರಮಗಳ ವಿವರಣೆ.
ಪ್ರತಿಪದೆಯಿಂದ - ಸಪ್ತಮಿಯವರೆಗೆ
1)ಪ್ರಾಥಃಕಾಲ 4-30 ರಿಂದ ಶ್ರೀ ಚಿದಂಬರೇಶ್ವರರಿಗೆ ಭೂಪಾಳಿ ಕಾಕಡಾರತಿ ಪೂಜೆ, 8 ರಿಂದ 9 ರವರೆಗೆ ಶ್ರೀ ಶಿವಕಲಶದೊಂದಿಗೆ ತಾಲ, ವಿಣಾ, ಮೃದಂಗ ಸಹಿತ ಅಖಂಡ ನಾಮಸ್ಮರಣೆಯಿಂದ ಪ್ರಾಕಾರ ಪ್ರದಕ್ಷಿಣೆ, ಗಣಪತಿ ಮಹಾಪೂಜೆ ಅನುಷ್ಠಾನಕರಿಗೆ ವರ್ಣಿಕೊಡುವುದು.
2) 9 ರಿಂದ 12 ರವರೆಗೆ ಸಾಮೂಹಿಕ ಶ್ರೀ ಚಿದಂಬರ ಚರಿತ್ರೆ ಪಾರಾಯಣ
3) ಮಧ್ಯಾಹ್ನ 12 ರಿಂದ 2 ರವರೆಗೆ ರುದ್ರಾಭಿಷೇಕ ಪೂಜೆ, ಮಹಾಮಂಗಳಾರತಿ, ಮಹಾನೈವೇದ್ಯ
4) ಮಧ್ಯಾಹ್ನ 2 ರಿಂದ ಮಹಾಪ್ರಸಾದ ವಿತರಣೆ
5) ಸಾಯಂಕಾಲ 5 ರಿಂದ 7 ವಾಙ್ಮಯ ಸೇವೆ
6) 7 ರಿಂದ 8 ರವರೆಗೆ ಸಂಗೀತ ಸೇವೆ ಸಾಮಪ್ರದಾಯಕ ಭಜನೆ
7)8 ರಿಂದ 9 ರವರೆಗೆ ಪೂಜೆ ಶೇಜಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ.


ಷಷ್ಠಿ ದಿನದಂದು ಶ್ರೀ ಚಿದಂಬರೇಶ್ವರ ಪ್ರತಿಷ್ಠಾ ಅಂಗವಾಗಿ ಮಧ್ಯಾಹ್ನ 12 ರಿಂದ 2 ರವರೆಗೆ ಚಿದಂಬರೇಶ್ವರರಿಗೆ ಕ್ಷೀರಾಭಿಷೇಕ, ರುದ್ರಾಭಿಷೇಕ, ಅಲಂಕಾರ ಪೂಜೆ, ಧೂಪ-ದೀಪ, ನೈವೇದ್ಯ, ಆರತಿ, ಮಹಾಮಂಗಳಾರತಿ, ಮಂತ್ರಪುಷ್ಪ, ಪ್ರಾರ್ಥನೆ ಹಾಗೂ ತೀರ್ಥ ಪ್ರಸಾದ ವಿತರಣೆ.
1)ಶ್ರೀ ಚಿದಂಬರೇಶ್ವರ ವೇದ ಸಂಸ್ಕøತ ಪಾಠ ಶಾಲೆಯ ಪ್ರಾರಂಭದ ವಾರ್ಷಿಕ ದಿನಾಚರಣೆ ಅಂಗವಾಗಿ ಹೋಮ ಹವನ.
2)ವೈಶಾಖ ಶುದ್ಧ ತೃತಿಯಾ – ಅಕ್ಷಯ ತೃತಿಯಾ ನಿಮಿತ್ಯ ಅಭ್ಯಂಗ ಸ್ನಾನ, ಪೂಜೆ, ಧೂಪ, ದೀಪ, ನೈವೇದ್ಯ.

ಸೂಚನೆಗಳು :

  1. i)ಪ್ರವಚನ, ಕೀರ್ತನೆ, ಸಂಗೀತಗಾರರ ಹೆಸರು, ಸಮಯ ಹಾಗೂ ಹೆಚ್ಚಿನ ಕಾರ್ಯಕ್ರಮ ಇದ್ದಲ್ಲಿ ಆಯಾ ದಿನದಂದು ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.
  2. ii)ಪಾರಾಯಣ ಮಾಡುವವರು ಶ್ರೀ ಚಿದಂಬರ ಚರಿತ್ರೆ ತಾವೇ ತೆಗೆದುಕೊಂಡು ಚೈತ್ರ ವದ್ಯ ಅಮವಾಸ್ಯೆ ದಿನ ಸಾಯಂಕಾಲದೊಳಗೆ ಶ್ರೀ ಕ್ಷೇತ್ರಕ್ಕೆ ಬರಬೇಕು. ಉತ್ಸವಕ್ಕೆ ಬರುವವರು ತಮ್ಮ ಅವಶ್ಯಕ ವಸ್ತುಗಳಾದ ತಂಬಿಗೆ, ಥಾಲಿ, ತೀರ್ಥ ಸೌಟು, ಉಟ್ಟುಕೊಳುವ ಮಡಿ ಮತ್ತು ಹಾಸಿಗೆ ಹೊದಿಕೆಗಳನ್ನು ಅವಶ್ಯವಾಗಿ ತರಬೇಕು.

iii) ಜೇಷ್ಠ ಮಾಸ :
ಜೇಷ್ಠ ವದ್ಯ ನವಮಿ ಪ.ಪೂ. ತಪಸ್ವಿ ಮಾರ್ತಾಂಡ ದೀಕ್ಷಿತರ ಪುಣ್ಯ ತಿಥಿ ಪ್ರಯುಕ್ತ ಔದುಂಬರ ಕಟ್ಟೆಯಲ್ಲಿ ಔದುಂಬರ ವೃಕ್ಷಕ್ಕೆ ಹಾಗೂ ಶಿಲಾ ಪಾದುಕೆಗಳಿಗೆ ಅಭಿಷೇಕ ವಿಶೇಷ ಅಲಂಕಾರ, ಪೂಜೆ, ಧೂಪ, ದೀಪ, ನೈವೇದ್ಯ, ಆರತಿ, ಮಹಾಮಂಗಳಾರತಿ, ಮಂತ್ರಪುಷ್ಪ, ವೈದಿಕ ಬ್ರಾಹ್ಮಣರ ಪಾದ ಪೂಜೆ, ದಕ್ಷಿಣೆ ಸಮರ್ಪಣೆ, ವಿಶೇಷ ಅನ್ನ ಸಂತರ್ಪಣೆ.

iv) ಆಷಾಢ ಮಾಸ :
ಆಷಾಢ ಶುದ್ಧ ಏಕಾದಶಿ ವಿಶೇಷ ಪೂಜೆ, ಅಭಿಷೇಕ, ಶುದ್ಧ ಪೌರ್ಣಿಮಾ ಗುರು ಪೌರ್ಣಿಮಾ ನಿಮಿತ್ಯ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ವ್ಯಾಸ ಪೂಜೆ.

v) ಶ್ರಾವಣ ಮಾಸ :
  1. 1) ಶ್ರಾವಣ ಶುದ್ಧ ಪ್ರತಿಪದೆಯಿಂದ ವದ್ಯ ಅಮವಾಸ್ಯೆಯವರೆಗೆ ಲಕ್ಷಬಿಲ್ವಾರ್ಚನೆ, 11 ರಿಂದ 2 ರವರೆಗೆ ಪ್ರತಿನಿತ್ಯ ರುದ್ರಾಭಿಷೇಕ (ಪಂಚಾಮೃತ) ಅಲಂಕಾರ ಪೂಜೆ ಧೂಪ, ದೀಪ, ನೈವೇದ್ಯ, ಶ್ರೀ ಚಿದಂಬರ ಸಹಸ್ರನಾಮಾವಳಿಯೊಂದಿಗೆ ಸಹಸ್ರ ಬಿಲ್ವಾರ್ಚನೆ, ಆರತಿ, ಮಹಾಮಂಗಳಾರತಿ, ಮಂತ್ರಪುಷ್ಪ, ಪ್ರಾರ್ಥನೆ ಹಾಗೂ ತೀರ್ಥ ಪ್ರಸಾದ ವಿತರಣೆ. ಸಾಯಂಕಾಲ 4 ರಿಂದ 6 ಶ್ರೀ ಚಿದಂಬರ ಚರಿತ್ರೆ ಮಹಾಪುರಾಣ, 6 ರಿಂದ 8 ರವರೆಗೆ ಸಂಗೀತ ಸೇವೆ ಹಾಗೂ ಸಾಂಪ್ರದಾಯಕ ಭಜನೆ ಹಾಗೂ ಶೇಜಾರತಿ, ತೀರ್ಥ ಪ್ರಸಾದ ವಿತರಣೆ. ಪ್ರತಿ ಸೋಮವಾರ ವಿಶೇಷ ಪೂಜೆ. ಸಾಯಂಕಾಲ 3 ರಿಂದ 5 ರವರೆಗೆ ವಾಙ್ಮಯ ಸೇವೆ, ಉಪನ್ಯಾಸ, ಕೀರ್ತನೆ, ಸಂಗೀತ ಸೇವೆ 5 ರಿಂದ 6 ರವರೆಗೆ ಪಾಲಕಿ ಸೇವೆ. 6 ರಿಂದ 8 ರವರೆಗೆ ಸಾಂಪ್ರದಾಯಕ ಭಜನೆ.
  2. 2) ಶುಕ್ಲಪಕ್ಷ ಪೌರ್ಣಿಮಾ ಶ್ರಾವಣಿ ನೂತನ ಉಪಾಕರ್ಮ, ಯಜ್ಞೋಪವಿತ ಧಾರಣ. ಶ್ರಾವಣ ವೈದ್ಯ ನವಮಿಯಿಂದ – ಅಮಾವಾಸ್ಯೆವರೆಗೆ ಒಂದು ವಾರ ಪರ್ಯಂತ ಶ್ರೀ ಚಿದಂಬರೇಶ್ವರ ದಿಂಡಿ ವಿಭಾಗ ಹಾಗೂ ಸಂಗೀತ ಸೇವೇ ಸಾಂಪ್ರದಾಯಕ ಭಜನಾ ವಿಭಾಗದಿಂದ ಹಾಗೂ ವಿವಿಧ ಗ್ರಾಮಗಳ ಭಜನಾ ಮಂಡಳಿಗಳಿಂದ ನಗರ ಸಂಕೀರ್ತನೆ.
ಶ್ರಾವಣ ಅಮಾವಾಸ್ಯೆ ದಿವಸ ವೈಭವ ಪೂರ್ವ ದಿಂಡಿ ಸಹಿತ ಚಿದಂಬರ ಭಾವಚಿತ್ರ ಮೂಲ ಪಾದುಕೆ ಅಕ್ಷಯ ಕಲಶದೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಜರಗುವುದು. ನಂತರ ಪುರಾಣ ಮಂಗಲ ವಿಶೇಷ ಅನ್ನಸಂತರ್ಪಣೆ.
ಸಾಯಂಕಾಲ ಸಂಗೀತ ಸೇವೇ, ಸಾಂಪ್ರದಾಯಕ ಭಜನೆ, ಶ್ರಾವಣ ಮಾಸದಲ್ಲಿ ಸೇವೆ ಸಲ್ಲಿಸಿದ ವೈದಿಕ ವೃಂದ, ಪುರಾಣಿಕರು, ತಬಲಾ ಹಾಗೂ ಹಾರ್ಮೋನಿಯಂ ಸೇವೆ ಸಲ್ಲಿಸಿದವರಿಗೆ, ಪ್ರವಚನ, ಕೀರ್ತನೆ, ಸೇವೆ ಸಲ್ಲಿಸಿದವರಿಗೆ ಹಾಗೂ ವಿವಿಧ ಭಜನಾ ಮಂಡಳಿಗಳಿಯವರಿಗೆ ಸಂಭಾವನೆ ಸಹಿತ ವಸ್ತ್ರದಾನ, ಫಲ ಮಂತ್ರಾಕ್ಷತೆ, ಆಶೀರ್ವಾದ ಪ.ಪೂ. ಪೀಠಾಧಿಕಾರಿಗಳಿಂದ ನಿಡುವದು ಹಾಗೂ ಆಶೀರ್ವಚನ ಕಲ್ಪವರಿಯೊಂದಿಗೆ ಶ್ರಾವಣೋತ್ಸವ ಮಂಗಲ ಶ್ರಾವಣ ತೃತಿಯಾ ದಿವಾಕರ ಜಯಂತಿ ಲಕ್ಷ್ಮೀಮಾತಾ ಪುಣ್ಯ ತಿಥಿ. (ವಿಷೇಷ ಪೂಜೆ ಪ್ರಾರ್ಥನೆ, ಸಂಗೀತ ಸೇವೆ, ಭಜನೆ)

vi) ಭಾದ್ರಪದ ಮಾಸ :
1) ಭಾದ್ರಪದ ಶುದ್ಧ ಪ್ರತಿಪದೆ ಪ.ಪೂ. ಚಿದಂಬರ ಲೀನ 6 ನೇ ಪೀಠಾಧಿಕಾರಿಗಳ ಪುಣ್ಯೋತ್ಸವ ನಿಮಿತ್ಯ ವಿಶೇಷ ಪೂಜೆ, ಅನ್ನದಾನ, ದಿವಾಕರ ದೀಕ್ಷಿತರ ಭಾವಚಿತ್ರದೊಂದಿಗೆ ಭವ್ಯ ಮೆರವಣಿಗೆ, 6 ರಿಂದ 8 ರವರೆಗೆ ವಿಶೇಷ ಸಂಗೀತ ಸೇವೆ, ಸಾಂಪ್ರದಾಯಕ ಭಜನೆ.
2) ಚತುರ್ಥಿ : ಗಣೇಶ ಉತ್ಸವ, ಗಣಪತಿ ಪ್ರತಿಷ್ಠಾಪನೆ, ಆಹ್ವಾನ ಪೂಜೆ, ಧೂಪ-ದೀಪ, ನೈವೇದ್ಯ, ಆರತಿ, ಪ್ರಾರ್ಥನೆ ವಿಶೇಷ ಅನ್ನಸಂತರ್ಪಣೆ. ಸಾಯಂಕಾಲ ಶಮಂತಕೋಪಾಖ್ಯಾನ ಗ್ರಂಥ ಪಠಣ.
3) ಅಷ್ಟಮಿ : ಶ್ರೀ ಜೇಷ್ಠಾ ಗೌರಿ ಪೂಜಾ ವೃತ, ದೂರಗ್ರಹಣ ಚತುರ್ದಶಿ ಅನಂತ ಪೂಜೆ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಕ ಪೂಜೆ, ಅನಂತ ಪೂಜಾ, ಗ್ರಂಥ ಪಠಣ.

vii ಅಶ್ವೀನ ಮಾಸ :
ಅಶ್ವೀನ ಶುದ್ಧ ಪ್ರತಿಪದೆಯಂದು - ಪಂಚಮಿಯವರೆಗೆ ಮರಿನವಮಿ (ಶಾರದಾ) ನವರಾತ್ರಿ, ಶ್ರೀ ಲಲಿತಾ ಪಂಚಮಿ ನಿಮಿತ್ಯ ಮನೆ ದೇವರಿಗೆ ಅಭ್ಯಂಗ ಅಭಿಷೇಕ ಪೂಜೆ 48 ದೂರ್ವಾಗಳ (ಕರ್ಕಿ) ಒಂದು ಕಟ್ಟು ಅಂತಹ 48 ದೂರ್ವಾ (ಕರ್ಕಿದಳ) ಕಟ್ಟುಗಳಿಂದ ಆವಾಹಿತ ಲಲಿತಾದೇವಿ ವೇದೋಕ್ತಪೂಜೆ, ಧೂಪ ದೀಪ ನೈವೇದ್ಯ, ಆರತಿ, ಪ್ರಾರ್ಥನೆ.
1) ನವಮಿ : ಮಹಾನವಮಿ, ಖಂಡೇ ಪೂಜೆ, ಆಯುಧ ಪೂಜೆ, ವಿವಿಧ ವಾಹನ, ರಥ, ಪಾಲಕಿ, ವಿವಿಧ ವಸ್ತುಗಳ ಪೂಜೆ.
2) ವಿಜಯ ದಶಮಿ : ಶ್ರೀ ಚಿದಂಬರೇಶ್ವರ ವಿಶೇಷ ಅಭಿಷೇಕ ಪೂಜೆ, ಪ್ರಾರ್ಥನೆ, ಮಹಾನೈವೇದ್ಯ ಹಾಗೂ ವಿವಿಧ ದೇವತೆಗಳಿಗೆ 108 ನೈವೇದ್ಯ. ಸಾಯಂಕಾಲ ಸೀಮೋಲಂಘನ, ರವಿ ಪೂಜೆ.
3) ಗುರುದ್ವಾದಶಿ : ದತ್ತ ಪಾದುಕಾ ದತ್ತ ಮಂದಿರದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಪ್ರಾರ್ಥನೆ, ಧೂಪ ದೀಪ, ನೈವೇದ್ಯ ಪ್ರಸಾದ ವಿತರಣೆ.
ನರಕ ಚತುರ್ದಶಿ ಹಾಗೂ ಅಮಾವಾಸ್ಯೆ ದಿವಸ ವಿಶೇಷ ಪೂಜೆ ನಡೆಯುವವು.

viii) ಕಾರ್ತಿಕ ಮಾಸ :
ಕಾರ್ತಿಕ ಶುಕ್ಲ ಪ್ರತಿಪದೆ ಶ್ರೀ ಚಿದಂಬರೇಶ್ವರರಿಗೆ ಅಭ್ಯಂಗ ಅಭಿಷೇಕ, ಪಂಚಾಮೃತ, ರುದ್ರಾಭಿಷೇಕ, ಅಲಂಕಾರ ಪೂಜೆ, ಬಿಲ್ವಾರ್ಚನೆ, ಧೂಪ-ದೀಪ, ಮಹಾನೈವೇದ್ಯ, ಆರತಿ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಕಾರ್ತಿಕ ವದ್ಯ ಷಷ್ಠಿಯಿಂದ – ಮಾಘಶೀರ್ಷ ಶುದ್ಧ ಸಪ್ತಮಿವರೆಗೆ ಆಚರಿಸುವ ಶ್ರೀ ಶಿವಚಿದಂಬರೇಶ್ವರ ಅಮರ ಜಯಂತಿ ಶೈವಾಗಮೋಕ್ತ ಮಹೋತ್ಸವದ ಪೂರ್ವ ತಯಾರಿ, ಆಮಂತ್ರಣ ಪತ್ರಿಕೆ ಪೂಜೆ, ಕೋಠಿ ಖೋಲಿ ಪೂಜೆ, ರಥದ ಮನೆಯಿಂದ ರಥ ಹೊರ ತೆಗೆಯುವದು ಹಾಗೂ ಪೂಜೆ, ಬಂದ ಭಕ್ತ ಸಮೂಹಕ್ಕೆ ದೀಪಾವಳಿ ವಿಶೇಷ ಫಲಹಾರ ಹಾಗೂ ಒಂದು ತಿಂಗಳ ಅಖಂಡ ದೀಪಾರಾಧನೆ.
ಕಾರ್ತಿಕ ವದ್ಯ ಷಷ್ಠಿ ಶ್ರೀ ಶಿವಚಿದಂಬರ ಮಹಾಸ್ವಾಮಿಗಳ ಅವತಾರ ಜಯಂತಿ ಪ್ರಯುಕ್ತ,

1) ಬೆಳಿಗ್ಗೆ 4 ರಿಂದ 5 ಶ್ರೀ ಶಿವ ಚಿದಂಬರೇಶ್ವರರಿಗೆ ಭೂಪಾಳಿ, ಕಾಕಡಾರತಿ, ಪ್ರಾತಃಕಾಲ ಪೂಜೆ ಮಂಗಳಾರತಿ.
2) ಬೆಳಿಗ್ಗೆ 9 ರಿಂದ 11 ಶ್ರೀ ಶಿವಚಿದಂಬರ ಮಹಾಸ್ವಾಮಿಗಳ ಭಾವಚಿತ್ರ, ಅಕ್ಷಯ ಕಲಶ ಹಾಗೂ ಪಾದುಕೆಗಳ ಮೆರವಣಿಗೆ.
3) ಮಧ್ಯಾಹ್ನ 11 ರಿಂದ 12 ಶ್ರೀ ಶಿವಚಿದಂಬರ ಜನ್ಮೋತ್ಸವ, ತೊಟ್ಟಿಲೋತ್ಸವ, ಪಾಳಣಾ ಅಭಂಗ ಹಾಗೂ ಆರತಿ, ನಾದ ಬ್ರಹ್ಮ ಚಿದಂಬರ ಸಂಗೀತ ವಿಭಾಗದಿಂದ ಶ್ರೀ ಚಿದಂಬರ ಮಹಾಸ್ವಾಮಿಗಳ ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ.
4) ಮಧ್ಯಾಹ್ನ 12 ರಿಂದ 2 ಕ್ಷೀರಾಭಿಷೇಕ ಮಹಾಪೂಜೆ, ಮಂಗಳಾರತಿ, ಮಹಾನೈವೇದ್ಯ.
5)  ಮಧ್ಯಾಹ್ನ 2 ರಿಂದ 4 ಮಹಾಪ್ರಸಾದ ವಿನಿಯೋಗ.
6)  ಸಾಯಂಕಾಲ 5 ರಿಂದ 7 ಸಂಗೀತ ಸೇವೆ ಹಾಗೂ ಸಾಂಪ್ರದಾಯಕ ಭಜನೆ.

ಕಾರ್ತಿಕ ವದ್ಯ ಸಪ್ತಮಿ
ಮಧ್ಯಾಹ್ನ 12 ರಿಂದ 2 ಮೊಸರಿನ ಅಭಿಷೇಕ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ಅಷ್ಟಮಿ
ಮಧ್ಯಾಹ್ನ ತುಪ್ಪದÀ ಅಭಿಷೇಕ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ನವಮಿ
ಜೇನು ತುಪ್ಪದಿಂದ ಅಭಿಷೇಕ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ದಶಮಿ
ಮಧ್ಯಾಹ್ನ ಸಕ್ಕರೆ ಅಭಿಷೇಕ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ಏಕಾದಶಿ
ಮಧ್ಯಾಹ್ನ ವಿವಿಧ ಹಣ್ಣುಗಳಿಂದ ಅಭಿಷೇಕ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ದ್ವಾದಶಿ
ಮಧ್ಯಾಹ್ನ ಗಂಧೋದಕದಿಂದ ಅಭಿಷೇಕ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ತ್ರಯೋದಶಿ
ಮಧ್ಯಾಹ್ನ ಎಳೆ ನೀರಿನಿಂದ ಅಭಿಷೇಕ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ಚತುರ್ದಶಿ
ಮಧ್ಯಾಹ್ನ ತುಳಸಿ, ಬಿಲ್ವಾರ್ಚನೆ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಕಾರ್ತಿಕ ವದ್ಯ ಅಮಾವಾಸ್ಯೆ
ಮಧ್ಯಾಹ್ನ ವಿವಿಧ ಪುಷ್ಪಗಳ ಅರ್ಚನೆ, ಸಾಯಂಕಾಲ ಸಂಗೀತ ಸೇವೆ, ಸಾಂಪ್ರದಾಯಿಕ ಭಜನೆ.

ಮಾರ್ಗಶೀರ್ಷ ಶುದ್ಧ ಪ್ರತಿಪದೆ
ಮುಂಜಾನೆ 6 ರಿಂದ 9 ಶ್ರೀ ಶಿವ ಚಿದಂಬರೇಶ್ವರ ಶೈವಾಗಮೋಕ್ತ ಮಹೋತ್ಸವದ ಸ್ವಸ್ತಿ ಪುಣ್ಯಾಹವಾಚನ, ನಾಂದಿ ಸ್ಥಾಪನೆ, ಮಧುಪರ್ಕ ಋತ್ವಿಗ ವರ್ಣವಿಧಾನೋಕ್ತ ಹುತ್ತ ಪೂಜೆಯೊಂದಿಗೆ ಶೈವಾಗಮೋಕ್ತ ಮಹೋತ್ಸವದ ಆರಂಭ.
ಮದ್ಯಾಹ್ನ 2 ರಿಂದ ಮಹಾ ಪ್ರಸಾದ.

ಮಾರ್ಗಶೀರ್ಷ ಶುದ್ಧ ದ್ವಿತೀಯ
1) ಮುಂಜಾನೆ 4 ರಿಂದ 6 ಧ್ವಜಾರೋಹಣ.
2) ಮುಂಜಾನೆ 6 ರಿಂದ 8 ಯಜ್ಞಮಂಟಪ ಪ್ರವೇಶ, ದೇವತಾ ಸ್ಥಾಪನೆ
. 3 )ಮುಂಜಾನೆ 9 ರಿಂದ 1 ಹೋಮ ಹವನ, ಚತುರ್ವೇದ ಪಾರಾಯಣ, ಅನುಷ್ಠಾನ, ಬಲಿಹರಣ ಪಾಲಖಿ ಸೇವೆ.
4) ಮದ್ಯಾಹ್ನ 1 ರಿಂದ 2 ಸಂಗೀತ ಸೇವೆ, ಶೇಷವಾಹನೋತ್ಸವ.
5) ಮದ್ಯಾಹ್ನ 2 ರಿಂದ ಮಹಾ ಪ್ರಸಾದ.
6) ಸಾಯಂಕಾಲ 6 ರಿಂದ 8 ಸಂಗೀತ ಸೇವೆ, ಮಯೂರ ವಾಹನೋತ್ಸವ, ಅಷ್ಟಾವಧಾನ ಸೇವೆ.

ಮಾರ್ಗಶೀರ್ಷ ಶುದ್ಧ ತೃತೀಯಾ
1 )ಬಳಿಗ್ಗೆ 5 ರಿಂದ 9 ಹೋಮ, ಹವನ, ಮಹಾಪೂಜೆ, ಚತುರ್ವೇದ ಪಾರಾಯಣ, ಬಲಿ, ಪಾಲಖಿ ಸೇವೆ.
2) ಮುಂಜಾನೆ 11 ರಿಂದ 2 ಸಂಗೀತ ಸೇವೆ ಹಾಗೂ ಗರುಡ ವಾಹನೋತ್ಸವ.
3) ಮದ್ಯಾಹ್ನ 2 ರಿಂದ ಮಹಾ ಪ್ರಸಾದ.
4) ಸಾಯಂಕಾಲ 6 ರಿಂದ 8 ಸಂಗೀತ ಸೇವೆ, ಮಯೂರ ವಾಹನೋತ್ಸವ, ಅಷ್ಟಾವಧಾನ ಸೇವೆ.

ಮಾರ್ಗಶೀರ್ಷ ಶುದ್ಧ ಚತುರ್ಥಿ
1) ಬಳಿಗ್ಗೆ 5 ರಿಂದ 9 ಹೋಮ, ಹವನ, ಮಹಾಪೂಜೆ, ಚತುರ್ವೇದ ಪಾರಾಯಣ, ಬಲಿ, ಪಾಲಖಿ ಸೇವೆ.
2) ಮುಂಜಾನೆ 11 ರಿಂದ 2 ಸಂಗೀತ ಸೇವೆ ಹಾಗೂ ಹಂಸವಾಹನೋತ್ಸವ.
3) ಮದ್ಯಾಹ್ನ 2 ರಿಂದ ಮಹಾ ಪ್ರಸಾದ.
4) ಸಾಯಂಕಾಲ 6 ರಿಂದ 9 ಸಂಗೀತ ಸೇವೆ, ವೃಷಭ ವಾಹನೋತ್ಸವ, ಅಷ್ಟಾವಧಾನ ಸೇವೆ.

ಮಾರ್ಗಶೀರ್ಷ ಶುದ್ಧ ಪಂಚಮಿ
1)  ಬಳಿಗ್ಗೆ 5 ರಿಂದ 9 ಹೋಮ, ಹವನ, ಮಹಾಪೂಜೆ, ಚತುರ್ವೇದ ಪಾರಾಯಣ, ಬಲಿ, ಪಾಲಖಿ ಸೇವೆ.
2) ಮುಂಜಾನೆ 11 ರಿಂದ 2 ಸಂಗೀತ ಸೇವೆ
ಹಾಗೂ ಅಶ್ವ ವಾಹನೋತ್ಸವ.
3) ಮದ್ಯಾಹ್ನ 2 ರಿಂದ ಮಹಾ ಪ್ರಸಾದ.
4) ಮದ್ಯಾಹ್ನ 3 ರಿಂದ 6 ಕೀರ್ತನೆ ಹಾಗೂ ಉಪನ್ಯಾಸ
5) ಸಾಯಂಕಾಲ 6 ರಿಂದ 9 ಸಂಗೀತ ಸೇವೆ, ಗಜವಾಹನೋತ್ಸವ, ಅಷ್ಟಾವಧಾನ ಸೇವೆ.

ಮಾರ್ಗಶೀರ್ಷ ಶುದ್ಧ ಷಷ್ಠಿ
1) ಬಳಿಗ್ಗೆ 5 ರಿಂದ 9 ಹೋಮ, ಹವನ, ಮಹಾಪೂಜೆ, ಚತುರ್ವೇದ ಪಾರಾಯಣ, ರಥ, ಹೋಮ, ಬಲಿ, ಪಾಲಖಿ ಸೇವೆ.
2) ಮುಂಜಾನೆ 11 ರಿಂದ 12 ಶ್ರೀ ಚಿದಂಬರೇಶ್ವರ ಕಲ್ಯಾಣೋತ್ಸವ.
3) ಮದ್ಯಾಹ್ನ 1 ರಿಂದ 2 ವನ ಯಾತ್ರೆ
4) ಮದ್ಯಾಹ್ನ 2 ರಿಂದ ಮಹಾ ಪ್ರಸಾದ.
5) ಸಾಯಂಕಾಲ 6 ರಿಂದ 9 ಸಂಗೀತ ಸೇವೆ, ವಿವಿಧ ದಿಂಢಿಗಳಿಂದ ಭಜನೆ, ಬಲಿ, ಪಾಲಖಿ ಸೇವೆ.
6) ರಾತ್ರಿ 9 ರಿಂದ ಚಿದಂಬರೇಶ್ವರ ಶಯನೋತ್ಸವ.

ಮಾರ್ಗಶೀರ್ಷ ಶುದ್ಧ ಸಪ್ತಮಿ
1) ಬಳಿಗ್ಗೆ 5 ರಿಂದ 9 ಹೋಮ, ಹವನ, ಮಹಾಪೂಜೆ, ಚತುರ್ವೇದ ಪಾರಾಯಣ, ರಥ, ಹೋಮ, ಬಲಿ, ಪಾಲಖಿ ಸೇವೆ.
2) ಮುಂಜಾನೆ 10 ರಿಂದ 12 ಅವಭೃತ ಸ್ನಾನ.
3) ಮದ್ಯಾಹ್ನ 1 ರಿಂದ 3 ಶೈವಾಗಮೋಕ್ತ ಮಹೋತ್ಸವದ ಯಜ್ಞದ ಪೂರ್ಣಾಹುತಿ ಮತ್ತು ಬುತ್ತಿ ಪೂಜೆ.
4) ಮದ್ಯಾಹ್ನ 3 ರಿಂದ 5 ಸಂಗೀತ ಸೇವೆ, ಮಹಾಸಮಾರಾಧನೆಯೊಂದಿಗೆ ಮಹೋತ್ಸವದ ಮಂಗಲ.
5) ಸಾಯಂಕಾಲ 5 ಮಹಾ ಪ್ರಸಾದ.

ಸೂಚನೆಗಳು
1) ಪ್ರವಚನ, ಕೀರ್ತನೆ, ಸಂಗೀತಗಾರರ ಹೆಸರು ಹಾಗೂ ಹೆಚ್ಚಿನ ಕಾರ್ಯಕ್ರಮಗಳಿದ್ದಲ್ಲಿ ಆಯಾ ದಿನದಂದು ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು.
2) ಯಾತ್ರಾರ್ಥಿಗಳು ತಮ್ಮ ಅಗತ್ಯದ ವಸ್ತುಗಳಾದ ತಂಬಿಗೆ, ಥಾಲಿ, ಹಾಸಿಗೆ, ಹೊದಿಕೆಗಳನ್ನು ಅವಶ್ಯವಾಗಿ ತರಬೇಕು. ಹಾಗೂ ತಮ್ಮ ವಸ್ತುಗಳ ಬಗ್ಗೆ ಜಾಗರೂಕತೆಯಿಂದಿರಬೇಕು.

ಮಾರ್ಗಶೀರ್ಷ ಶುದ್ಧ ಅಷ್ಟಮಿ
ಸಂಪ್ರೋಕ್ಷಣ ವಿಧಿ, ವಿನಾಯಕ ಶಾಂತಿ

ಮಾರ್ಗಶೀರ್ಷ ಶುದ್ಧ ಪೌರ್ಣೀಮೆ
ಶ್ರೀ ದತ್ತ ಜಯಂತಿ ನಿಮಿತ್ತ ದತ್ತ ಮಂದಿರ ಪಾದುಕೆಗಳಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಧೂಪ ದೀಪ ನೈವೇದ್ಯ, ಮಹಾಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ ಮತ್ತು ತೀರ್ಥ ಪ್ರಸಾದ ವಿತರಣೆ ವಿಶೇಷ ಅನ್ನದಾನ.

ಮಾರ್ಗಶೀರ್ಷ ವದ್ಯ ತೃತೀಯಾ
ಶ್ರೀ ಚಿದಂಬರೇಶ್ವರ ಜೇಷ್ಠ ಪುತ್ರರು ಹಾಗೂ ಶ್ರೀ ಚಿದಂಬರ ಮೂಲಪೀಠ ಮೂಲ ಮಹಾಕ್ಷೇತ್ರ ಸಂಸ್ಥಾನದ ಸಂಸ್ಥಾಪಕರು ಪೀಠಾಧಿಕಾರಿಗಳಾಗಿದ್ದ ಶ್ರೀಮತ್ ಪರಮಪೂಜ್ಯ ಬ್ರಹ್ಮಶ್ರೀ ಚಿ. ಲೀ. ಶ್ರೀ ದಿವಾಕರ ದೀಕ್ಷಿತರ ಪುಣ್ಯ ದಿನೋತ್ಸವ ಪ್ರಯುಕ್ತ ಶ್ರೀ ದಿವಾಕರ ದೀಕ್ಷಿತರ ಕಟ್ಟೆಗೆ ವಿಶೇಷ ಪೂಜೆ, ಧೂಪ ದೀಪ, ನೈವೇದ್ಯ, ಆರತಿ ಮಹಾಮಂಗಳಾರತಿ, ಮಂತ್ರ ಪುಷ್ಪ, ತೀರ್ಥ ಪ್ರಸಾದ ವಿತರಣೆ ಹಾಗೂ ವಿಶೇಷ ಅನ್ನದಾನ.

ix)ಪುಷ್ಯ ಮಾಸ

ಪುಷ್ಯ ಶುದ್ಧ ಚತುರ್ಥಿ : ಶ್ರೀ ಚಿದಂಬರ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರ ಕೆಂಗೇರಿಯಲ್ಲಿ ಸಗುಣ ರೂಪ ಮರೆ ಮಾಡಿ ನಿರ್ಗುಣ ನಿರಾಕಾರ ರೂಪದಿಂದ ಜ್ಯೋತಿ ಲಿಂಗಾವತಾರ ತಾಳಿದ ಪುಣ್ಯೋತ್ಸ ಅಂದು ಶ್ರೀ ಚಿದಂಬರೇಶ್ವರರಿಗೆ ಅಖಂಡ ನಾಮಸ್ಮರಣೆ, ಪಂಚಾಮೃತ, ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ, ಬಿಲ್ವಾರ್ಚನೆ, ಧೂಪ ದೀಪ, ನೈವೇದ್ಯ, ಆರತಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ವಿಶೇಷ ಅನ್ನಸಂತರ್ಪಣೆ. ಸಾಯಂಕಾಲ ಸಾಂಪ್ರದಾಯಿಕ ಭಜನೆ.
ಪುಷ್ಯ ಶುದ್ಧ ಅಷ್ಟಮಿಯಿಂದ ಪೌರ್ಣಿಮೆಯವರೆಗೆ
ಶ್ರೀ ಶಾಕಾಂಬರಿ ನವರಾತ್ರೋತ್ಸವ ಚತುರ್ದಶಿಯಿಂದ ಪಲ್ಲೆಯ ಹಬ್ಬ, ವಿಶೇಷ ಅನ್ನಸಂತರ್ಪಣೆ. ಸಾಯಂಕಾಲ ಸಂಗೀತ ಸೇವೆ ಹಾಗೂ ಸಾಂಪ್ರದಾಯಿಕ ಭಜನೆ.

x)ಮಾಘ ಮಾಸ
ಮಾಘ ಶುದ್ಧ ಸಪ್ತಮಿ : ರಥ ಸಪ್ತಮಿ, ವಿಶೇಷ ಅಭಿಷೇಕ, ಪೂಜೆ, ಸೂರ್ಯ ಆರಾಧನೆ.
ಮಾಘ ಶುದ್ಧ ಪೌರ್ಣಿಮೆ : ರೇಣುಕಾ ಆರಾಧನೆ, ಧೂಪ ದೀಪ, ನೈವೇದ್ಯ, ಪಡ್ಲಿಗಿ, ಮಂಗಳಾರತಿ, ಮಂತ್ರ ಪುಷ್ಪ, ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ.
ಮಾಘ ವದ್ಯ ತ್ರಯೋದಶಿ : ಮಹಾ ಶಿವರಾತ್ರಿ, ರಾತ್ರಿಯ ಯಾಮ ಪೂಜೆ. ಮರುದಿನ ಪಾರಣೆಯುಕ್ತ ಮಹಾಪ್ರಸಾದ. ಮಹಾ ಶಿವರಾತ್ರಿಯ ನಿಮಿತ್ತ ಜಾಗರಣೆ. ರಾತ್ರಿ ನಿರಂತರ ನಾಮ ಸ್ಮರಣೆ, ಸಂಗೀತ ಸೇವೆ, ಭಜನೆ ಸೇವೆಗಳು ಜರುಗುವದು.

xi)ಫಾಲ್ಗುಣ ಮಾಸ
ಫಾಲ್ಗುಣ ಶುದ್ಧ ದ್ವಾದಶಿ ದಿನ ಸ್ವಯಂ ಪ್ರಕಾಶ ಗುರುಗಳ ಆರಾಧನಾ ನಿಮಿತ್ತ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ.
ಫಾಲ್ಗುಣ ಶುದ್ಧ ಪೌರ್ಣಿಮೆಯ ದಿನ ಹೋಲಿಕಾ ಪೂಜೆ, ಮರುದಿನ ಕಾಮದಹನ.

ರಂಗ ಪಂಚಮಿ : ಶಾಲಿಗ್ರಾಮ ವಿಶೇಷ ಪೂಜೆ.

ಫಾಲ್ಗುಣ ವದ್ಯ ದ್ವಿತಿಯಾ :
ಶ್ರೀ ಚಿದಂಬರೇಶ್ವರ ಮೂಲ ಪೀಠ ಮೂಲ ಮಹಾಕ್ಷೇತ್ರ, ಸಂಸ್ಥಾನದ ದಿಂಡಿ ವಿಭಾಗದ ಪ್ರಥಮ ಸಂತರಾದ ಸಂತ ರಾಜಾರಾಮರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ, ಪ್ರಾಕಾರ ಪ್ರದಕ್ಷಿಣೆ, ಅನ್ನ ಸಂತರ್ಪಣೆ, ಸಾಯಂಕಾಲ ಸಂಗೀತ ಸೇವೆ ಹಾಗೂ ಸಾಂಪ್ರದಾಯಿಕ ಭಜನೆ.

VIII) ಶ್ರೀ ಶಿವಚಿದಂಬರೇಶ್ವರ ಮೂಲಪೀಠ ಮೂಲಮಹಾಕ್ಷೇತ್ರದ ಉಪಶಾಖೆಯ ಶ್ರೀ ಚಿದಂಬರ ಉಪಾಸನಾ ಮಂದಿರಗಳನ್ನು ಯಾವುದೇ ಉಪವಿಭಾಗವನ್ನು ಅವಶ್ಯಕತೆ ಅನುಸಾರ ಗ್ರಾಮ, ಪಟ್ಟಣ, ಶಹರ, ದೇಶ, ವಿದೇಶಗಳಲ್ಲಿ ಸ್ಥಾಪಿಸುವುದು, ಅವುಗಳನ್ನು ಮುನ್ನೆಡೆಸಿಕೊಂಡು ಹೋಗುವುದು. ಆಮೂಲಕ ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿಯನ್ನು ಉಂಟು ಮಾಡುವುದು.

IX) ಶ್ರೀ ಶಿವಚಿದಂಬರೇಶ್ವರ ಮೂಲಪೀಠ ಮೂಲಮಹಾಕ್ಷೇತ್ರ ಸಂಸ್ಥಾನದ ಯಾವತ್ತು ಆಸ್ತಿ ಪಾಸ್ತಿಗಳು ಮತ್ತು ವಿಭಾಗಗಳು ಪೀಠಾಧಿಕಾರಿಗಳ ಆಧೀನ ಮಾಲೀಕತ್ವದಲ್ಲಿ ಇರುತ್ತವೆ. ಪೀಠಾಧಿಕಾರಿಗಳು ಅವುಗಳನ್ನು ನಡೆಸಿಕೊಂಡು ಹೋಗಬೇಕು. ಹೆಚ್ಚಿನ ನಿಯಮಾವಳಿಗಳಿದ್ದಲ್ಲಿ ವಿಭಾಗಗಳ ಮುಂದಿನ ಭಾಗದಲ್ಲಿ ದಾಖಲಿಸಬೇಕು.

X) ಶ್ರೀ ಚಿದಂಬರೇಶ್ವರ ಸಂಸ್ಥಾನದ ಶ್ರೀ ಚಿದಂಬರೇಶ್ವರರ ಸಾಹಿತ್ಯ, ಭಾವಚಿತ್ರ, ಸ್ತೋತ್ರ, ಮಹಾತ್ಮ್ಯ, ಧ್ವನಿಸುರುಳಿ ಮುಂತಾದವುಗಳನ್ನು ಕೇವಲ ಪೀಠಾಧಿಕಾರಿಗಳಿಗೆ ಮಾತ್ರ ಪ್ರಕಟಿಸುವ ಅಧಿಕಾರವಿರುತ್ತದೆ.

XI) ಪೀಠಾಧಿಕಾರಿಗಳ ಹೆಸರಿನ ಮುಂದೆ ಗೌರವ ಪದ ಬಳಸುವ ಬಗೆ : ಪರಮಪೂಜ್ಯ ಬ್ರಹ್ಮಶ್ರೀ

XII) ಶ್ರೀ ಶಿವಚಿದಂಬರೇಶ್ವರ ಮೂಲಪೀಠ ಮೂಲಮಹಾಕ್ಷೇತ್ರ ಸಂಸ್ಥಾನದ ಸಂಕ್ಷಿಪ್ತ ವಿವರಣೆಗಳು :

1)  ಶ್ರೀ ಚಿದಂಬರ ಸಂಸ್ಥಾನ
2)  ಶ್ರೀ ಚಿದಂಬರ ಕ್ಷೇತ್ರ ಸಂಸ್ಥಾನ
3) ಶ್ರೀ ಕ್ಷೇತ್ರ ಸಂಸ್ಥಾನ
4)  ಶ್ರೀ ಕ್ಷೇತ್ರ ಕೆಂಗೇರಿ.

XIII) ಸಂಬಂಧಿಸಿದ ವಿಭಾಗಗಳಿಗೆ ""ಪೀಠಾಧಿಕಾರಿಗಳು _____ ವಿಭಾಗ'' ಶ್ರೀ ಕ್ಷೇತ್ರ ಕೆಂಗೇರಿ ಎಂದು ನಮೂದಿಸಬೇಕು.

XIV) ಸಂಸ್ಥಾನದ ಮುಖ್ಯ ಚಿಹ್ನೆಯಿದ್ದು, ಪ್ರತ್ಯೇಕ ವಿಭಾಗಕ್ಕೆ ಬೇರೆ ಬೇರೆ ಪ್ರಕಾರವಾಗಿ ಚಿಹ್ನೆಗಳನ್ನು ಮಾಡುವುದು.

XV) ಪೀಠಾಧಿಕಾರಿಗಳು ಉದ್ದೇಶಿತ ಕಾರ್ಯಕ್ಕೆ ಶ್ರೀ ಶಿವಚಿದಂಬರೇಶ್ವರ ಮೂಲಪೀಠ ಮೂಲಮಹಾಕ್ಷೇತ್ರದ ಸಂಸ್ಥಾನದ ವಿವಿಧ ವಿಭಾಗಗಳಿಗೆ ವೇತನ ಮೂಲಕ ಸಿಬ್ಬಂದಿಗಳನ್ನು, ಕಾರ್ಮಿಕರನ್ನು ಅರ್ಪಣಾ ಮನೋಭಾವದಿಂದ ಸ್ವಯಂ ಸೇವಕರನ್ನು ನಿರ್ದೇಶಕರನ್ನಾಗಿ ನೇಮಿಸುವ ಅಥವಾ ಕಡಿಮೆಗೊಳಿಸುವ ಅಧಿಕಾರವಿರುತ್ತದೆ.

XVI) ಪೀಠಾಧಿಕಾರಿಗಳು ತಮ್ಮ ಕುಟುಂಬದ ಸದಸ್ಯರಿಗೆ ಶ್ರೀಕ್ಷೇತ್ರ ಸಂಸ್ಥಾನದ ವಿವಿಧ ವಿಭಾಗಗಳಲ್ಲಿ ಯಾವದಾದರೊಂದು ವಿಭಾಗಕ್ಕೆ ಅವರ ಇಚ್ಚೆ ಇದ್ದಲ್ಲಿ ಆ ವಿಭಾಗದ ನಿಯಮ ಪಾಲನೆಯಂತೆ ನಿರ್ದೇಶಕರೆಂದು ನೇಮಿಸುವುದು ಹಾಗೂ ಕಡಿಮೆಗೊಳಿಸುವ ಅಧಿಕಾರ ಪೀಠಾಧಿಕಾರಿಗಳಿಗೆ ಇರುತ್ತದೆ.

XVII) ಅವಶ್ಯಕತಾನುಸಾರವಾಗಿ ಉದ್ದೇಶಿತ ಹೊಸ ಬೇರೆ ಬೇರೆ ವಿಭಾಗಗಳನ್ನು ಪ್ರಾರಂಭಿಸಲು, ಅವುಗಳ ಕಾರ್ಯ ಸ್ಥಗಿತಗೊಳಿಸಲು ಹಾಗು ವಿಲೀನ ಗೊಳಿಸಲು ಪೀಠಾಧಿಕಾರಿಗಳಿಗೆ ಅಧಿಕಾರ ವಿರುತ್ತದೆ.

XVIII) ಪೀಠಾಧಿಕಾರಿಗಳು ಶ್ರೀಕ್ಷೇತ್ರ ಸಂಸ್ಥಾನದಿಂದ ಸಂಚಾರ ಕೈಗೊಂಡು ಪ್ರವಾಸದಲ್ಲಿದ್ದಾಗ ಪೀಠಾಧಿಕಾರಿಗಳು ಕೂಡುವ ಪೀಠದ ಮೇಲೆ ಯಾರೂ ಕೂಡಬಾರದು. ಶ್ರೀಕ್ಷೇತ್ರದಲ್ಲಿ ಪೀಠಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪೀಠಾಧಿಕಾರಿಗಳು ತುರ್ತು ಕಾರ್ಯ ನಿರ್ವಹಣೆ ವಹಿಸಿಕೊಟ್ಟವರು ಮಾತ್ರ ಕಾರ್ಯನಿರ್ವಹಿಸಬೇಕು.

XIX) ಶ್ರೀ ಕ್ಷೇತ್ರ ಸಂಸ್ಥಾನದ ಆರ್ಥಿಕ ಸುದಾರಣೆ ದೃಷ್ಟಿಯಿಂದ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಮತ್ತು ವಿವಿಧ ಉದ್ಯೋಗ, ಕೈಗಾರಿಕೆಗಳನ್ನು ಪ್ರಾರಂಭಿಸಿ ನಡೆಸಿಕೊಂಡು ಹೋಗುವುದು.

XX) ಪೀಠಾಧಿಕಾರಿಗಳು ಅವಶ್ಯಕತೆನುಸಾರ ಕಾರ್ಯ ಬಾಹುಲ್ಯವಿದ್ದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಅಥವಾ ಭಕ್ತರನ್ನು ಉತ್ಸವದ ಆಮಂತ್ರಣ ಕೊಡುವದಕ್ಕಾಗಲೀ ಅಥವಾ ಉತ್ಸವ ಸೇವಾ ಸ್ವೀಕೃತಿಗಾಗಲೀ, ಬೇರೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಮ್ಮ ಪ್ರತಿನಿಧಿಯನ್ನಾಗಿ ಕಳುಹಿಸಿಕೊಡಬಹುದು. ಮತ್ತು ಅವರಿಂದ ಸಂಪೂರ್ಣ ವಿವರಣೆ ಪಡೆಯಬಹುದು.

XXI) ಪೀಠಾಧಿಕಾರಿಗಳು ಏಳು ವರ್ಣಗಳ ಪೇಟಾ ಹಾಗೂ ವಸ್ತ್ರಗಳನ್ನು ಧರಿಸಬಹುದು.

XXII) ಶ್ರೀ ಕ್ಷೇತ್ರದ ನಿಶಾನೆ ಹಳದಿ ವರ್ಣ, 7 ಮೋಳದಿರಬೇಕು. ಅದನ್ನು ದಿಂಡಿಯಲ್ಲಿ ಉಪಯೋಗಿಸಬೇಕು. ಉಪ ನಿಶಾನೆಗಳು ಬೇರೇ ಯಾವುದೇ ಆಕಾರದಲ್ಲಿರಬಹುದು.

XXIII) ೀ ಕ್ಷೇತ್ರ ಸಂಸ್ಥಾನದ ಮುಖ್ಯ ಆರಾಧ್ಯ ಉಪಾಸನಾ ದೇವತೆಗಳು : ಶ್ರೀ ಸರಸ್ವತಿ, ಸಾವಿತ್ರಿ ಮಾತಾ, ಶ್ರೀ ಚಿದಂಬರೇಶ್ವರ ಹಾಗು ಶಿವ ಪಂಚಾಯತ, ಈಶ್ವರ, ಶಕ್ತಿ, ಗಣಪತಿ, ವಿಷ್ಣು, ಮಹೇಶ್ವರ, ಗಾಯತ್ರೀ, ಉಪದೇವತೆಗಳು ಮಾರುತಿ, ಶ್ರೀ ರಾಮ ಪಂಚಾಯತ, ಅಶ್ವಥ ವೃಕ್ಷ, ಔದುಂಬರ ವೃಕ್ಷ, ಮಾರ್ತಾಂಡ ದೀಕ್ಷಿತರ ಪಾದುಕಾ, ಶ್ರೀ ಲಕ್ಷ್ಮಿ ಮಾತಾ ಪಾದುಕಾ, ಶ್ರೀ ಬನಶಂಕರಿ, ಶ್ರೀ ದಿವಾಕರ ದೀಕ್ಷಿತ, ಯಮುನಾಬಾಯಿ ಕಟ್ಟೆ.

ಶ್ರೀ ಶಿವಚಿದಂಬರೇಶ್ವರ ಮೂಲ ಪೀಠ, ಮೂಲ ಮಹಾಕ್ಷೇತ್ರ ಸಂಸ್ಥಾನದ ನೀತಿ ಸಂಹಿತೆ

ಭಾಗ – 2

I) ಶ್ರೀ ಶಿವ ಚಿದಂಬರೇಶ್ವರ ಮೂಲಪೀಠ ಮೂಲಮಹಾಕ್ಷೇತ್ರ ಸಂಸ್ಥಾನದ ಯಾವುದೇ ಸ್ಥಿರಾಸ್ತಿಗಳನ್ನು ಮಾರಾಟ ಅಥವಾ ಯಾವುದೇ ತರಹದ ಹಸ್ತಾಂತರ ಯಾವ ಕಾಲಕ್ಕೂ ಮಾಡಲು ಯಾರಿಗೂ ಅಧಿಕಾರವಿರುವದಿಲ್ಲಾ.

II) ನಾನು ಟ್ರಸ್ಟಿನ ಏಕಮೇವ ಟ್ರಸ್ಟಿಯಾಗಿ ಸಂಸ್ಥಾನದಿಂದ ಬರುವ ಎಲ್ಲಾ ಆದಾಯಗಳನ್ನು ಕಾಲಕಾಲಕ್ಕೆ ಪಡೆಯುವ ಅದಿಕಾರ ಹೊಂದಿರುತ್ತೇನೆ.

III) ನಾನು ಸಂಸ್ಥಾನದ ಎಲ್ಲಾ ಕಟ್ಟಡಗಳ ತೆರಿಗೆ, ನೀರಿನ ತೆರಿಗೆ, ವಿದ್ಯುತ್, ಟೆಲಿಫೋನ ಮತ್ತು ಸಂಸ್ಥಾನಕ್ಕೆ ಸಂಬಂಧಿಸಿದ ಸಾರಿಗೆ ವೆಚ್ಚಗಳನ್ನು ಹಾಗೂ ಆದಾಯ ತೆರಿಗೆಯನ್ನು ಈ ಆದಾಯದಿಂದ ಭರಿಸುವ ಅಧಿಕಾರ ಹೊಂದಿರುತ್ತೇನೆ.

IV) ಈ ವೆಚ್ಚಗಳನ್ನು ಭರಿಸಿ ಉಳಿದ ಆದಾಯವನ್ನು ಈ ಕೆಳಕಂಡ ಉದ್ದೇಶಗಳಿಗೆ ವಿನಿಯೋಗಿಸುವ ಅಧಿಕಾರ ಹೊಂದಿರುತ್ತೇನೆ.
i) ನೂತನ ಕಟ್ಟಡ ನಿರ್ಮಾಣ.
ii) ಅನ್ನಛತ್ರ ನಿತ್ಯ ಅನ್ನದಾನ ನಡೆಸುವುದು.
iii) ವೇದ, ಸಂಸ್ಕøತ ಪಾಠಶಾಲೆ ಮತ್ತು ವಿವಿಧ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದು, ನಡೆಸುವುದು ಹಾಗೂ ಬೇರೆ ವಿದ್ಯಾ ಸಂಸ್ಥೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವುದು.
iv) ಸಂಸ್ಥಾನಕ್ಕೆ ಬೇಕಾಗುವ ವಾಹನಗಳನ್ನು ಹಾಗೂ ವಿವಿಧ ಚರಾಸ್ತಿಗಳನ್ನು ಖರೀದಿಸುವದು.

v) ಸಂಸ್ಥಾನದ ವಿವಿಧ ವಿಭಾಗಗಳ ಸಿಬ್ಬಂದಿಗೆ ವೇತನ ನೀಡುವದು.

V) ವಿವಿಧ ವಿಭಾಗಗಳಿಗೆ ಸೂಕ್ತ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ಹಾಗೂ ಕಾರ್ಯಕರ್ತರನ್ನು ನೇಮಿಸುವ ಹಾಗೂ ಕೆಲಸದಿಂದ ತೆಗೆದು ಹಾಕುವ ಅಧಿಕಾರ ಹೊಂದಿರುತ್ತೇನೆ.

VI) ಸಿಬ್ಬಂದಿ ಹಾಗೂ ಕಾರ್ಮಿಕರ ವೇತನ ನಿಗದಿಪಡಿಸುವ ಹಾಗೂ ವೇತನ ನೀಡುವದು ಅಧಿಕಾರ ಹೊಂದಿರುತ್ತೇನೆ.

VII) ಪೀಠಾಧಿಕಾರಿಗಳು ಆಗಾಗ ವೇಳೆ ತೆಗೆದುಕೊಂಡು ಸಂಸ್ಥಾನದ ವಿವಿಧ ವಿಭಾಗಗಳ ಪ್ರಗತಿ ಸಾಧನೆಗಾಗಿ ಸಂಬಂಧಿಸಿದ ಸಿಬ್ಬಂದಿಗಳ ಸಭೆ ಕರೆದು ಆ ವಿಭಾಗದ ಕಾರ್ಯದಕ್ಷತೆ ಬಗ್ಗೆ ಚರ್ಚೆ ಮಾಡುವುದು. ಅವಶ್ಯಕತೆಯನ್ನು ಪೂರೈಸುವುದು.

VIII) ಶ್ರೀ ಕ್ಷೇತ್ರದ ಒಳಾಂಗಣದಲ್ಲಿ ಮತ್ತು ಪ್ರಾಕಾರದಲ್ಲಿ ಪಾದರಕ್ಚೆಗಳನ್ನು ಯಾರು ಹಾಕಿಕೊಂಡು ಬರಬಾರದು. ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರಬೇಕು.

IX) ದೆವಸ್ಥಾನದ ನಂದಿ ಮಂಟಪ ಹಾಗು ಗರ್ಭಗುಡಿಯಲ್ಲಿ ಒಳಗೆ ಪ್ರವೇಶ ನಿಷೇಧಿಸಲಾಗಿದೆ.

X) ಅಭಿಷೇಕ ಹಾಗು ವಿವಿಧ ಅರ್ಚನಾದಿಗಳನ್ನು ಮಾಡಲಿಚ್ಚಿಸುವವರು ಅಭಿಷೇಕ ಹಾಗು ವಿವಿಧ ಅರ್ಚನಾ ವಿಭಾಗಗಳನ್ನು ಸಂಪರ್ಕಿಸಬೇಕು. ನಿಗದಿತ ಶುಲ್ಕ ನೀಡಿ ಅರ್ಹತಾ ಪತ್ರ ಪಡೆಯಬೇಕು.

XI) ಅಭಿಷೇಕ ಹಾಗು ವಿವಿಧ ಅರ್ಚನೆ ಮಾಡಿಸುವವರು ಸಂಕಲ್ಪ ವಿಭಾಗದಲ್ಲಿ ಪಾಲ್ಗೊಂಡು ಹೊರಗಿನಿಂದ ಅಭಿಷೇಕ ಮಾಡುವುದನ್ನು, ಪೂಜೆ ಮಾಡುವುದನ್ನು ಪೂಜಿಸಬೇಕು. ಅರ್ಚಕರಿಂದ ತೀರ್ಥ, ಪಂಚಾಮೃತ ಸ್ವೀಕರಿಸಬೇಕು. ನಂತರ ಪೀಠಾಧಿಕಾರಿಗಳಿಂದ ಅಭಿಷೇಕ ಹಾಗು ಫಲ ಮಂತ್ರಾಕ್ಷತೆ ಪಡೆಯಬೇಕು.

XII) ಅನ್ನದಾನ ಮಹಾಕ್ಷೇತ್ರದಲ್ಲಿ ನಿಗದಿ ಮಾಡಿದ ಸಮಯದಲ್ಲಿ ಉಪಸ್ಥಿತರಿದ್ದು ಅತಿಥಿಗಳು, ಭಕ್ತರು, ಯಾತ್ರಿಕರು, ವೇದ ಪಾಠಶಾಲೆಯ ವಿದ್ಯಾರ್ಥಿಗಳು, ಕಾರ್ಯಕರ್ತರು, ಉಪಹಾರÀ ಹಾಗು ಮಹಾಪ್ರಸಾದವನ್ನು ಪಡೆಯಬೇಕು.

XIII) ಚಿದಂಬರ ಭಕ್ತನಿವಾಸದಲ್ಲಿ ಭಕ್ತರು, ಅತಿಥಿ ನಿವಾಸದಲ್ಲಿ ಅತಿಥಿಗಳು, ಯಾತ್ರಿಕರು, ಕಾರ್ಯಕರ್ತರ ನಿವಾಸದಲ್ಲಿ ಕಾರ್ಯಕರ್ತರು ವಸತಿ ಪಡೆಯಬೇಕು. ಮತ್ತೊಬ್ಬರ ಯಾವುದೇ ತರಹದ ವಸ್ತುಗಳನ್ನು ಮುಟ್ಟಬಾರದು.

XIV) ವಸತಿ ಗ್ರಹ ಹಾಗು ಸಾಮೂಹಿಕ ಸ್ನಾನ ಗ್ರಹ, ಶೌಚಾಲಯದಲ್ಲಿ ಹಾಗೂ ಒಳಾಂಗಣದಲ್ಲಿ ಸ್ವಚ್ಛತೆ ಕಾಪಾಡಬೇಕು.

XV) ಉಪಸ್ಥಿತರಿದ್ದ ಭಕ್ತಾದಿಗಳು, ಯಾತ್ರಿಕರು ಶ್ರೀಕ್ಷೇತ್ರದಲ್ಲಿ ಜರುಗುವ ತ್ರಿಕಾಲ ಪೂಜೆ, ಜಪ, ತಪ ಅನುಷ್ಠಾನ, ಸಂಗೀತ ಸೇವೆ ಸಾಂಪ್ರದಾಯಿಕ ಭಜನೆ, ಶೇಜಾರತಿ, ಯಾವತ್ತೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬೇಕು.

XVI) ಉತ್ಸವ – ಮಹೋತ್ಸವದಲ್ಲಿ ಸಭಾಮಂಟಪದಲ್ಲಿ ಚಿದಂಬರೇಶ್ವರ ಉತ್ಸವ ಮೂರ್ತಿಯಲ್ಲಿ ವಿರಾಜಮಾನರಾಗುತ್ತಾರೆ. ಅಂತಹ ಸಂದರ್ಭದಲ್ಲಿ ಸಭಾಮಂಟಪದಲ್ಲಿ ಕುಳಿತುಕೊಳುವವರು, ತಲೆಯ ಮೇಲೆ ಟೋಪಿ ಹಾಕಿ ಕೊಳ್ಳಬೇಕು. ಅಥವಾ ಅಂಗಿ ತೆಗೆದು ಕೊಡಬೇಕು, ಹಾಗು ಶಾಂತತೆ, ಗಂಭೀರತೆಯನ್ನು ಕಾಪಾಡಬೇಕು.

XVII) ಮಧ್ಯಪಾನ, ಧೂಮ್ರಪಾನ ಮಾಡಿದವರಿಗೆ ಅಥವಾ ಮಾಡುವವರಿಗೆ ಶ್ರೀಕ್ಷೇತ್ರದಲಿ ಪ್ರವೇಶವಿಲ್ಲ.

XVIII) ಜಪ, ಪಾರಾಯಣ, ಪ್ರದಕ್ಷಿಣೆ, ಭಜನೆ ಯಾವುದೇ ಸೇವಾ ಕಾರ್ಯಗಳನ್ನು ಶ್ರೀಕ್ಷೇತ್ರದ ನಿಯಮಪ್ರಕಾರ ನಡೆಯಬೇಕು.

XIX) ಸಮಸ್ಯೆಗಳು ಬಂದಾಗ ಶ್ರೀ ಕ್ಷೇತ್ರದ ಸಂಸ್ಥಾನದ ನಿಯಮ ಹಾಗು ಹಿತ ಕಾಪಾಡಲು ಆಪ್ತಾಲೋಚನೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು, ಇಲ್ಲವೇ ನ್ಯಾಯಾಲಯದ ಮೂಲಕ ಬಗೆಹರಿಸಿಕೊಳ್ಳುವುದು.

XX) ಶ್ರೀ ಚಿದಂಬರ ಸೇವಾ ದಳದ ಕಾರ್ಯಕರ್ತರು ಸೇವಾಕಾರ್ಯದಲ್ಲಿ ನಿರತದಲ್ಲಿದ್ದಾಗ ಸ್ತ್ರೀ ಪುರುಷರು ಹಳದಿ ವರ್ಣದ ವಸ್ತ್ರಗಳನ್ನು ಧರಿಸಬೇಕು.

XXI) ಶ್ರೀ ಚಿದಂಬರ ಸೇವಾ ದಳದ ಶಾಖೆಗೆ ಕಾರ್ಯಕರ್ತರನ್ನು ನೇಮಿಸಿ ಅವರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದಶಿಂ ಖಜಾಂತಿ ಹೀಗೆ ಗೌರವ ಸ್ಥಾನಗಳನ್ನು ಕೊಡುವುದು, ಅದನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಪುನರಚಿಸಲಾಗುವುದು.

XXII) ಸೇವಾದಳದ ಕಾರ್ಯಕರ್ತರು ನಿಯಮ ಉಲ್ಲಂಘಿಸುವವರು, ವಿರೋಧ ಚಟುವಟಿಕೆಗಳನ್ನು, ನಿರಾಸಕ್ತಿ ತೋರಿಸುವವರನ್ನು ಸೇವಾ ದಳದ ವಿಭಾಗದಿಂದ ಕಡಿಮೆಗೊಳಿಸಲಾಗುವುದು.

XXIII) ಅವಶ್ಯಕತಾನುಗುಣವಾಗಿ ಶ್ರೀ ಕ್ಷೇತ್ರ ಸಂಸ್ಥಾನದಿಂದ ಶ್ರೀ ಚಿದಂಬರ ಭಕ್ತಿ ಸಂಪ್ರದಾಯ ಜಾಗೃತಿ, ನಾಮಸ್ಮರಣೆ, ವಿವಿಧ ಸ್ಥಳಗಳಲ್ಲಿ ಕೈಗೊಂಡು ಹಾಗು ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಹಾಗು ಸದ್ಭಾವನಾಯಾತ್ರೆಯನ್ನು ದಕ್ಷಿಣ ಹಾಗು ಉತ್ತರ ಭಾರತದಲ್ಲಿ ಪ್ರವಾಸವನ್ನು ಕೈಗೊಳ್ಳುವದು. ಇದರಲ್ಲಿ ಪೀಠಾಧಿಕಾರಿಗಳ ಕುಟುಂಬ ಹಾಗು ಭಕ್ತ ಪರಿವಾರದವರಿಗೆ ಮಾತ್ರ ಪ್ರವೇಶವಿರುತ್ತದೆ.

XIV) ಶ್ರೀ ಚಿದಂಬರ ಅವತಾರ ಜಯಂತಿ, ನಿಯಮ ದಾಖಲಿಸಬೇಕು.

ಶ್ರೀ ಶಿವಚಿದಂಬರೇಶ್ವರ ಮೂಲ ಪೀಠ, ಮೂಲ ಮಹಾಕ್ಷೇತ್ರ ಸಂಸ್ಥಾನದ ನೀತಿ ಸಂಹಿತೆ

ಭಾಗ – 3

I) ವೃದ್ಧಾಶ್ರಮ, ಅನಾಥಾಶ್ರಮ, ಗ್ರಂಥಾಲಯ, ಧ್ಯಾನ ಮಂದಿರ, ತಪೋವನ ಸ್ಥಾಪಿಸುವದು ಮತ್ತು ನಿರ್ವಸುವುದು.

II) ಶ್ರೀಕ್ಷೇತ್ರದ ವರ್ಷವಿಡಿ ನಿತ್ಯ, ಮಾಸಿಕ ವಾರ್ಷಿಕ ಕಾರ್ಯಕ್ರಮ ಹಾಗೂ ಮಹೋತ್ಸವಗಳನ್ನು ನಡೆಸುವದು.

III) ಭಕ್ತರಿಗೆ ವಸತಿ ನಿಲಯ ಸ್ಥಾಪಿಸುವದು ಹಾಗೂ ನಿರ್ವಹಿಸುವದು.

IV) ಸಂಸ್ಥಾನದಿಂದ ಬಂದ ಆದಾಯದಿಂದ ಈ ಕೆಳಕಂಡ ವಿವಿಧ ನಿಧಿಗಳನ್ನು ಸ್ಥಾಪಿಸುವದು ಹಾಗೂ ಉಪಯೋಗಿಸುವದು.

i) ಅನ್ನದಾನ ನಿಧಿ : ಈ ನಿಧಿಯ ಬಡ್ಡಿ ಹಣದಲ್ಲಿ ನಿತ್ಯ ಅನ್ನದಾನ ಮಾಡುವುದು.

ii) ಶಾಶ್ವತ ಅಭಿಷೇಕ ನಿಧಿ : ಈ ನಿಧಿಯ ಬಡ್ಡಿ ಹಣದಲ್ಲಿ ವರ್ಷಕ್ಕೊಮ್ಮೆ ಅಭಿಷೇಕ ಮಾಡುವುದು.

iii) ಶಾಶ್ವತ ಬಿಲ್ವಾರ್ಚನೆ ನಿಧಿ : ಈ ನಿಧಿಯ ಬಡ್ಡಿ ಹಣದಲ್ಲಿ ವರ್ಷಕ್ಕೊಮ್ಮೆ ಬಿಲ್ವಾರ್ಚನೆ ಮಾಡುವುದು.

iv) ಕುಂಕುಮಾರ್ಚನೆ ನಿಧಿ : ಈ ನಿಧಿಯ ಬಡ್ಡಿ ಹಣದಲ್ಲಿ ವರ್ಷಕ್ಕೊಮ್ಮೆ ಕುಂಕುಮಾರ್ಚನೆ ಮಾಡುವುದು.

V) ಸಿಬ್ಬಂದಿ ವೇತನ ನಿಧಿ : ಈ ನಿಧಿಯ ಬಡ್ಡಿ ಹಣದಲ್ಲಿ ಕಾಲ ಕಾಲಕ್ಕೆ ಸಿಬ್ಬಂದಿ ವೇತನ ನೀಡುವದು.

vi) ಧರ್ಮಾರ್ಥ ನಿಧಿ : ಈ ನಿಧಿಯ ಬಡ್ಡಿ ಹಣದಲ್ಲಿ ಬಡ ಮತ್ತು ಅವಶ್ಯಕ ಜನರಿಗೆ ಉಪನಯನ ಹಾಗೂ ಮದುವೆ ನೆರವೇರಿಸಲು ಸಹಾಯ ಮಾಡುವದು.

V) ದೇಶ, ವಿದೇಶಗಳಿಂದ ಬರುವ ಭಕ್ತರು ಚಿದಂಬರ ಮಹಾಸ್ವಾಮಿಯ ಅನುಗ್ರಹ ಹಾಗೂ ಆಶೀರ್ವಾದ ಪಡೆಯುವ ಭಕ್ತರಿಂದ ತನು-ಮನ-ಧನ, ಧಾನ್ಯ ರೂಪದಲ್ಲಿ ದಾನ ಪಡೆಯುವ ಮತ್ತು ದಾನ ನೀಡುವ ಅಧಿಕಾರ ಇರುತ್ತದೆ.

VI) ವಿವಿಧ ಗ್ರಾಮ, ಪಟ್ಟಣ, ದೇಶ ವೆದೇಶಗಳಲ್ಲಿ ಚಿದಂಬರ ಮಹಾಸ್ವಾಮಿಯ ಚಿದಂಬರ ದಿಂಡಿ, ಭಜನಾ ಮಂಡಳಿ ಹಾಗೂ ಚಿದಂಬರ ಸೇವಾ ಸಮಿತಿಗಳನ್ನು ಪ್ರಾರಂಭಿಸುವದು. ಚಿದಂಬರ ಸಂಪ್ರದಾಯಗನುಸಾರವಾಗಿ ಪೀಠಾಧಿಕಾರಿಗಳು ಶ್ರೀ ಚಿದಂಬರ ಮೂಲಮಹಾಕ್ಷೇತ್ರ ಮಹಾ ಸಂಸ್ಥಾನ ಮುರಗೋಡ ಇವರಿಂದ ಅನುಮತಿ ಪಡೆದು ಪ್ರಾರಂಭಿಸಬೇಕು.

VII) ಶ್ರೀ ಕ್ಷೇತ್ರದ ಸಂಸ್ಥಾನದ ವಿವಿಧ ವಿಭಾಗಗಳ ನಿಯಮಗಳನ್ನು ನಡೆಸಿಕೊಂಡು ಹೋಗಬೇಕು.

VIII) ಶ್ರೀ ಚಿದಂಬರ ಜಯಂತಿ ಆಚರಿಸುವ ಭಕ್ತರು ಚಿದಂಬರ ಆಚರಣೆ ನಿಯಮದ ಪ್ರಕಾರ ಆಚರಿಸಬೇಕು.

IX) ಸಮಯೋಚಿತ ಸ್ಮರಣಸಂಚಿಕೆ ಬಿಡುಗಡೆ ಮಾಡುವುದು.

X) ಯಾವತ್ತು ಶ್ರೀ ಕ್ಷೇತ್ರ ಸಂಸ್ಥಾನದ ವಿಧಿ-ನಿಯಮ ವೈದಿಕ ಕರ್ಮಾಚರಣೆಗಳನ್ನು ವೈದಿಕ ಧರ್ಮದ ನಿಯಮದ ಪ್ರಕಾರ ನಡೆಸಿಕೊಂಡು ಹೋಗುವುದು.

XI) ಅವಶ್ಯಕತೆನುಸಾರ ನೂತನ ವಿಭಾಗಗಗಳನ್ನು ಪ್ರಾರಂಭಿಸುವುದು ಹಾಗೂ ಅವುಗಳನ್ನು ನಡೆಸಿಕೊಂಡು ಹೋಗುವುದು. ಅಲ್ಲದೆ ಅವುಗಳ ಕಾರ್ಯ ಸ್ಥಗಿತ ಮಾಡಲೂಬಹುದು.

XII) ಉತ್ಸವ ಮಹೋತ್ಸವಗಳಲ್ಲಿ ಶ್ರೀಕ್ಷೇತ್ರಕ್ಕೆ ಸಂಗೀತಗಾರರಿಂದ ಸಂಗೀತ ಸೇವೆ, ಕೀರ್ತನಾಕಾರರಿಂದ ಕೀರ್ತನೆ, ಇತರ ಜನರಿಂದ ಪ್ರವಚನ, ಉಪನ್ಯಾಸ ಏರ್ಪಡಿಸುವುದು.

XIII) ಶ್ರೀ ಶಿವಚಿದಂಬರೇಶ್ವರ ಮೂಲ ಪೀಠ, ಮೂಲ ಮಹಾಕ್ಷೇತ್ರ ಸಂಸ್ಥಾನದ ಶಾಖೆಯ ಶ್ರೀ ಚಿದಂಬರ ಉಪಾಸನಾ ಮಂದಿರಗಳನ್ನು ಅವಶ್ಯಕತೆನುಸಾರ ಗ್ರಾಮ, ಪಟ್ಟಣ, ದೇಶ, ವಿದೇಶಗಳಲ್ಲಿ ಪ್ರಾರಂಭಿಸುವುದು. ಅವುಗಳನ್ನು ನಡೆಸಿಕೊಂಡು ಹೋಗೊವುದು. ಆ ಮೂಲಕ ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿ ಮಾಡುವುದು.

XIV) ಸಾಮಾಜಿಕ ಚಿಂತನೆ ಜೊತೆಗೆ ಶೈಕ್ಷಣಿಕ ಪ್ರಗತಿ ಸಾಧನೆಗಾಗಿ ಪೂರ್ವ ಪ್ರಾಥಮಿಕ, ಪ್ರೌಢಶಾಲೆಗಳನ್ನು ಹಾಗೂ ಪಿ.ಯು.ಸಿ. ಹಾಗೂ ವಿವಿಧ ಪದವಿ ಮಹಾ ವಿದ್ಯಾಲಯಗಳನ್ನು ಮತ್ತು ಆಯ್.ಟಿ.ಆಯ್. ಡಿಪ್ಲೋಮಾ ತಾಂತ್ರಿಕ ಶಿಕ್ಷಣ (ಬಿ.ಇ.), ವೈದ್ಯಕೀಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ ಅವುಗಳನ್ನು ಮುನ್ನೆಡಿಸಿಕೊಂಡು ಹೋಗೊವುದು.

XV) ಪೀಠಾಧಿಕಾರಿಗಳ ಆಪ್ತ ಕಾರ್ಯದರ್ಶಿ ಕಾರ್ಯಾಲಯ ಮತ್ತು ವಿವಿಧ ಕಾರ್ಯಕ್ರಮಗಳ ನಿರ್ವಹಣೆಗಾಗಿ ಸೂಕ್ತ ವ್ಯಕ್ತಿಗಳನ್ನು ನೇಮಿಸುವುದು ಹಾಗೂ ವಜಾಗೊಳಿಸಬಹುದು.

XVI) ಸಂಸ್ಥಾನದ ವಿವಿಧ ವಿಭಾಗಕ್ಕೆ ಸಿಬ್ಬಂದಿ, ಕಾರ್ಯಕರ್ತರನ್ನು ನೇಮಿಸುವ ಬಗ್ಗೆ ಅವರ ಒಪ್ಪಿಗೆ ಪಡೆದು ನೇಮಿಸಬೇಕು.

XVII) ಅವಶ್ಯಕತೆ ಅನುಸಾರವಾಗಿ ಸಾಮಾಜಿಕ ಪ್ರಗತಿ ಚಿಂತನೆ ಕಾರ್ಯ ವಿಶ್ವಮಾನವ ಸಮಾಜ ಶಾಂತಿ ಸೌಹಾರ್ದತೆಗೆ ಮಾನವ ಏಕತೆ, ಮಾನವತೆ ಅರಿವು ಮೂಡಿಸಲು ಗ್ರಾಮ, ಪಟ್ಟಣ, ತಾಲೂಕಾ, ಜಿಲ್ಲೆ, ರಾಜ್ಯ, ದೇಶ, ವಿಶ್ವ ಮಟ್ಟದಲ್ಲಿ ಏಕತೆ ಸಂಘಟನಾ ಕಾರ್ಯವನ್ನು ಕೈಗೊಳ್ಳುವುದು. ಅದಕ್ಕೆ ಸಂಬಂಧಿಸಿದ ತಿಳುವಳಿಕೆ ಮೂಡಿಸುವುದು. ಅವಶ್ಯಕತೆನುಸಾರವಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

XVIII) ಸರ್ವ ಧರ್ಮ ಜಾಗೃಗೋಸ್ಕರವಾಗಿ ಸರ್ವಧರ್ಮ ಸಮ್ಮೇಳನವನ್ನು ನಡೆಸುವುದು. ಸಹಿಷ್ಣುತೆ ಮೂಡಿಸುವುದು.

XIX) ವಿದ್ಯಾರ್ಥಿಗಳಿಗೆ ಶಿಕ್ಷಣದ ಅಭಿವೃದ್ಧಿ ಬಗ್ಗೆ ಹಾಗು ಉದ್ಯೋಗಗಳ ಬಗ್ಗೆ ತಿಳುವಳಿಕೆ ಶಿಕ್ಷಣ, e್ಞÁನ ಶಿಬಿರಗಳನ್ನು ನಡೆಸುವುದು.

XX) ಸಾಹಿತ್ಯಗೋಷ್ಠಿ, ಕವಿಗೋಷ್ಠಿ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡುವುದು.

XXI) ಶ್ರೀ ಚಿದಂಬರ ಶ್ರೇಷ್ಠ ಸಂತ ಭಕ್ತರಾದ ಸಂತ ರಾಜಾರಾಮ, ವಿಠಾಬಾಯಿ, ಶಿವಶಾಸ್ತ್ರೀ, ಭೋಜಪುತ್ರ ದೇಶಪಾಂಡೆ, ಸಖಾರಾಮ ಗರ್ದೆ ಮುಂತಾದ ಸಂತ ಭಕ್ತರ ಜನ್ಮ, ಪುಣ್ಯದಿನಗಳ ನಿಮಿತ್ಯ ಶ್ರೀ ಚಿದಂಬರೇಶ್ವರರಿಗೆ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುವುದು.

XXII) ಶ್ರೀ ಚಿದಂಬರ ಹೆಸರಿನಲ್ಲಿ ಸ್ಥಾಪಿಸುವ ಭಕ್ತರು ಶ್ರೀ ಚಿದಂಬರ ಸೇವಾ ಸಮಿತಿ, ದಿಂಡಿ, ಭಜನಾ ಮಂಡಳ ಇವುಗಳ ಸ್ಥಾಪಿಸುವ ಕುರಿತು ಹಾಗೂ ಸೇವಾ ಸಮಿತಿ, ದಿಂಡಿ, ಭಜನಾ ಮಂಡಳಗಳ ಕಾರ್ಯ ಸಾಧನೆ ಬಗ್ಗೆ ಪೀಠಾಧಿಕಾರಿಗಳ ಹತ್ತಿರ ಬಂದು ಆಪ್ತಾವಲೋಚನ ಮಾಡಿ ಒಪ್ಪಿಗೆ ಪಡೆಯಬೇಕು. ಶ್ರೀ ಚಿದಂಬರ ಸೇವಾ ಸಮಿತಿ, ದಿಂಡಿ, ಭಜನಾ ಮಂಡಳಿಗಳ ಸದಸ್ಯರಾಗುವವರು ಶ್ರೀ ಚಿದಂಬರ ನಾಮ ದೀಕ್ಷೆ, ಗುರೂಪದೇಶ ಪಡೆಯಬೇಕು. ಶ್ರೀ ಚಿದಂಬರ ಸೇವಾ ಸಮಿತಿ, ದಿಂಡಿ, ಭಜನಾ ಮಂಡಳ ಸದಸ್ಯರು ವಾರಕ್ಕೊಮ್ಮೆ ತಮ್ಮ ಕಾರ್ಯಾಲಯದಲ್ಲಿ ಅಥವಾ ಸಮಿತಿಯ ಸದಸ್ಯರ, ಅಪೇಕ್ಷಿತ ಭಕ್ತರ ಮನೆಯಲ್ಲಿ ಸಾಂಪ್ರದಾಯಿಕ ಭಜನೆ, ನಾಮಸ್ಮರಣೆ, ಧ್ಯಾನ ಈ ಕಾರ್ಯಕ್ರಮಗಳನ್ನು ಮಾಡಬೇಕು. ವಾರ್ಷಿಕ ಕಾರ್ತಿಕ ವದ್ಯ ಷಷ್ಠಿ ಶ್ರೀ ಚಿದಂಬರ ಅವತಾರ ಜಯಂತಿ ಆಚರಣೆ ಮಾಡಬೇಕು. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಜಯಂತಿಯನ್ನು ಜಯಂತಿ ಆಚರಣೆ ನಿಯಮಾನುಸಾರ ಆಚರಿಸಬೇಕು. ಶ್ರೀ ಚಿದಂಬರ ಮೂಲ ಕ್ಷೇತ್ರದಲ್ಲಿ ಜರುಗುವ ಉತ್ಸವ ಮಹೋತ್ಸವಗಳಲ್ಲಿ ಸೇವಾ ಸಮಿತಿಯ, ದಿಂಡಿ, ಭಜನಾ ಮಂಡಳಿÀ ಸದಸ್ಯರು ಭಾಗವಹಿಸಬೇಕು. ಮತ್ತು ಸೇವಾಕರ್ತನಾಗೀ ಸ್ವಾಮಿಯ ಸೇವೆ ಮಾಡಬೇಕು. ಶ್ರೀ ಚಿದಂಬರ ಸೇವಾ ಸಮಿತಿ, ದಿಂಡಿ, ಭಜನಾ ಮಂಡಳಗಳು ಚಿದಂಬರ ಜಯಂತಿ ಉತ್ಸವ, ಜಯಂತಿ ಆಚರಣೆಗಾಗಿ ಸೇವಾ ನಿಧಿ, ಧಾನ ಸಂಗ್ರಹವನ್ನು ಆಯಾ ಸಮಿತಿಯ ಕಾರ್ಯಕ್ಷೇತ್ರಗಳಲ್ಲಿ ಸಂಗ್ರಹಿಸಬೇಕು. ಜಯಂತಿ ಉತ್ಸವ ಆಚರಣೆ ಆದ ನಂತರ ಉಳಿದ ಸೇವೆಯನ್ನು ಚಿದಂಬರ ಮೂಲಕ್ಷೇತ್ರಕ್ಕೆ ಸಮರ್ಪಿಸಬೇಕು.

XXIII) ಅವಶ್ಯಕತಾನುಗುಣವಾಗಿ ಶ್ರೀ ಕ್ಷೇತ್ರದಲ್ಲಿ ಸಂಸ್ಥಾನದ ಅಭಿವೃದ್ದಿ ಹಾಗು ಪ್ರಗತಿ ಸಾಧನೆಗಾಗಿ ಶ್ರೀ ಚಿದಂಬರ ಭಕ್ತ ವೃಂದದಲ್ಲಿ ಉದ್ದೇಶಿತ ಸೇವಾಕಾರ್ಯ ನಿರ್ಮಾಣ ಹಾಗು ಸರ್ಮಪಣ ಸಮಿತಿಯನ್ನು ರಚಿಸುವುದು ಹಾಗೂ ವಿಸರ್ಜಿಸುವ ಅಧಿಕಾರ ಪೀಠಾಧಿಕಾರಿಗಳಿಗೆ ಇರುತ್ತದೆ.

XXIV) ಆಭಿಷೇಕ ಹಾಗು ಅರ್ಚನಾ ವಿಭಾಗದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಿದ ಸೇವಾಕರ್ತರ ಹಾಗು ದಾನಿಗಳ ವಿವರಣೆಯನ್ನು ಶ್ರೀಕ್ಷೇತ್ರ ಸಮಾಚಾರದ ಮೂಲಕ ಶ್ರೀ ಚಿದಂಬರ ಪ್ರಭೆ ಪತ್ರಿಕೆಯಲ್ಲಿ ಪ್ರಕಟಿಸುವುದು.

ಮುಂದೆವರೆಯುವುದು...